ಮೇ ೨೨ - ಮೇ ತಿಂಗಳ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೨ನೇ (ಅಧಿಕ ವರ್ಷದಲ್ಲಿ ೧೪೩ನೇ) ದಿನ. ಮೇ ೨೦೨೪ == ಪ್ರಮುಖ ಘಟನೆಗಳು == ೧೯೭೨ - ಸಿಲೋನ್ ಹೊಸ ಸಂವಿಧಾನವನ್ನು ಅಳವಡಿಸಿಕೊಂಡು ತನ್ನ ಹೆಸರನ್ನು ಶ್ರೀ ಲಂಕ ಎಂದು ಬದಲಾಯಿಸಿಕೊಂಡಿತು. ೧೯೯೦ - ಉತ್ತರ ಮತ್ತು ದಕ್ಷಿಣ ಯೆಮೆನ್‍ಗಳ ಯೆಮೆನ್ ಗಣರಾಜ್ಯವಾಗಿ ಒಂದಾದವು. ೨೦೦೬ - ಮೋಂಟೆನೆಗ್ರೊದಲ್ಲಿನ ಪ್ರಜಾಭಿಮತ ಸಂಗ್ರಹದ ಫಲಿತಾಂಶದ ಘೋಷಣೆ - ೫೫.೪% ಜನ ಸೆರ್ಬಿಯ ಮತ್ತು ಮೊಂಟೆನೆಗ್ರೊದಿಂದ ಸ್ವಾತಂತ್ರ್ಯಕ್ಕೆ ಮತ ಚಲಾಯಿಸಿದ್ದರು. ೨೦೧೦ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಡುಬೈನಿಂದ ಬೆಳಿಗ್ಯೆ ೬-೩೦ ಕ್ಕೆ ಬಂದಿಳಿದ ಏರ್ ಇಂಡಿಯ ವಿಮಾನ,( 737-800) ರನವೇ ನಲ್ಲಿ ಪಕ್ಕಕ್ಕೆ ತಿರುಗಿಕೊಂಡು ವೇಗವಾಗಿ ಧಾವಿಸಿದ್ದಲ್ಲದೆ, ಅಲ್ಲಿನ ಮರಕ್ಕೆ ಡಿಕ್ಕಿಹೊಡೆದು ಮುಂದೆ ಸಾಗಿ, ಒಂದು ಕಂದರದಲ್ಲಿ ಬಿದ್ದಿತು. ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರಲ್ಲಿ ೧೫೮ ಮಂದಿ ಅಸುನೀಗಿದರು. ಹೇಗೋ ಅದೃಷ್ಟದಿಂದ ೮ ಜನ ಬದುಕುಳಿದಿದ್ದಾರೆ. ಸುಮಾರು ಒಂದೂವರೆ ದಶಕದಲ್ಲಿ ಇಷ್ಟು ಹೀನಾಯವಾದ ವಿಮಾನ ದುರ್ಘಟನೆ ಇದಾಗಿದೆ. == ಜನನ == ೧೭೭೨ - ರಾಜ ರಾಮ್ ಮೊಹನ್ ರಾಯ್, ಹಿಂದೂ ಧರ್ಮದ ಸುಧಾರಣಾಕಾರ. ೧೮೫೯ - ಸರ್ ಆರ್ಥರ್ ಕಾನನ್ ಡೊಯ್ಲ್, ಬ್ರಿಟನ್ನ ಲೇಖಕ. ೧೯೦೭ - ಹೆರ್ಗೆ, ಬೆಲ್ಜಿಯಂನ ಚಿತ್ರಕಥೆ ಲೇಖಕ. == ನಿಧನ == ೩೩೭ - ಮೊದಲನೇ ಕಾನ್ಸ್ಟಾನ್ಟಿನ್, ರೋಮ್‍ನ ಚಕ್ರವರ್ತಿ. == ಹಬ್ಬಗಳು/ಆಚರಣೆಗಳು == ಯೆಮೆನ್ ಗಣರಾಜ್ಯ - ರಾಷ್ಟ್ರೀಯ ದಿನಾಚರಣೆ. ಶ್ರೀ ಲಂಕಾ - ರಾಷ್ಟ್ರೀಯ ನಾಯಕರ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ